Skip to main content

Full text of "100. ಅಲ್ ಆದಿಯಾತ್"

See other formats


No ಯಾವು ಉಂಬ ಯಾ 


ಬರೂರ OOO TINTS ಅದೂ ಯ್‌ 


ಮೂವ 


(ಅವತೀರ್ಣ - ಮಕ್ಕಾದಲ್ಲಿ) 
ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ 


ಬುಸುಗುಡುತ್ತ ಓಡುವವುಗಳ (ಕುದುರೆಗಳ) ಆಣೆ- 

ಅವು (ತಮ್ಮ ಗೊರಸುಗಳಿ೦ದ) ಕಿಡಿಗಳನ್ನು ಹಾರಿಸುತ್ತವೆ- 
ಅನಂತರ ಪ್ರಾತಃಕಾಲದಲ್ಲಿ ಆಕ್ರಮಣ ನಡೆಸುತ್ತವೆ- 

ಆಗ ಅವು ಧೂಳೆಬ್ಬಿಸುತ್ತವೆ- 


ತರುವಾಯ ಇದೇ ಸ್ಥಿತಿಯಲ್ಲಿ ಯಾವುದಾದರೂ ಜನ ಸಮೂಹ 
ದೊಳಕ್ಕೆ ನುಗ್ಗಿ ಬಿಡುತ್ತವೆ- 


ವಾಸ್ತವದಲ್ಲಿ ಮಾನವನು ತನ್ನ ಪ್ರಭುವಿಗೆ ಬಹಳ ಕೃತ್ನು ಕವಿಸ ಬಡ ಬಿಸಿ ಭ್ರ 
ನ್‌ 4 
ನಾಗಿದ್ದಾನೆ.! 


ಮತ್ತು ಇದಕ್ಕೆ ಸ್ವತಃ ಅವನೇ ಸಾಕ್ಲಿಯಾಗಿದ್ದಾನೆ.? 


ಅವನು ಧನ ಕನಕಗಳ ಅತಿಯಾದ ಮೋಹದಲ್ಲಿ ಸಿಲುಕಿ 
ಕೊಂಡಿದ್ದಾನೆ. 


. ಅರ್ಥಾತ್‌- ಅಲ್ಲಾಹನು ಅವರಿಗೆ ದಯಪಾಲಿಸಿರುವ ಶಕ್ತಿ-ಸಾಮರ್ಥ್ಯಗಳನ್ನು ಶೋಷಣೆ ಮತ್ತು ದಬ್ಬಾಳಿಕೆಗಾಗಿ ಉಪಯೋಗಿಸುತ್ತಾನೆ. 
. ಅರ್ಥಾತ್‌- ಅವನ ಆತ್ಮಸಾಕ್ಸಿಯೇ ಇದಕ್ಕೆ ಸಾಕ್ಸಿ, ಅವನ ಕರ್ಮಗಳು ಇದಕ್ಕೆ ಸಾಕ್ಷಿ. ಅಲ್ಲದೆ ಸತ್ಯನಿಷೇಧಿಗಳಾದ ಅನೇಕ ವ್ಯಕ್ತಿಗಳು 
ನಾಲಗೆಯಿ೦ದಲೂ ತಮ್ಮ ಕೃತಪ್ನುತೆಯನ್ನು ವ್ಯಕ್ತಪಡಿಸುತ್ತಾರೆ. 


ಕಾಂಡ - 30 


100. ಅಲ್‌ಆದಿಯಾತ್‌ 1063 


9-10. ಸಮಾಧಿಗಳೊಳಗೆ (ದಫನವಾಗಿ) ಇರುವ ಸಕಲವನ್ನೂ ಹೊರ 
ತೆಗೆಯಲಾಗುವ ಮತ್ತು ಹೃದಯಗಳೊಳಗೆ (ಅಡಗಿ) ಇರುವ 
ಎಲ್ಲವನ್ನೂ ಹೊರತೆಗೆದು ವಿಚಾರಣೆಗೊಳ ಪಡಿಸಲಾಗುವ ಆ 
ಸಂದರ್ಭವನ್ನು ಅವನು ಅರಿತಿಲ್ಲವೇ?* 


. ಖಂಡಿತವಾಗಿಯೂ ಅಂದು ಅವರ ಪ್ರಭು ಅವರನ್ನು ಪೂರ್ಣವಾಗಿ 
ತಿಳಿದವನಾಗಿರುವನು.* 


3. ಅರ್ಥಾತ್‌- ಮನಸ್ಸಿನಲ್ಲಡಗಿದ್ದ ಇರಾದೆ ಮತ್ತು ಉದ್ದೇಶಗಳನ್ನೆಲ್ಲಾ ಬಹಿರ೦ಗಗೊಳಿಸಲಾಗುವುದು. ಅದರ ಬಗ್ಗೆ ಪರಿಶೋಧನೆ ನಡೆಸಿ 
ಒಳ್ಳೆಯದು ಮತ್ತು ಕೆಟ್ಟದ್ದನ್ನು ಆರಿಸಿ ಪ್ರತ್ಕೇಕ ಗೊಳಿಸಲಾಗುವುದು. 
4. ಅರ್ಥಾತ್‌- ಯಾರು ಹೇಗಿದ್ದಾರೆ ಮತ್ತು ಯಾವ ಶಿಕ್ಷೆ ಅಥವಾ ಪ್ರತಿಫಲಕ್ಕೆ ಅರ್ಹರಾಗಿದ್ದಾರೆ ಎಂದು ಅವನಿಗೆ ಚೆನ್ನಾಗಿ ತಿಳಿದಿದೆ. 


ಕಾಂಡ - 30